Pages

Subscribe:

4/11/10

ಐಂದ್ರಿತಾ ರೇ

ಚಿಗರೆ ಕಂಗಳ ಚೆಲುವೆ ಅಂದ್ರಿತಾ ರೇ



ಕನ್ನಡ ಚಿತ್ರರಂಗದಲ್ಲಿ ಹೊಸನಟಿಯರ ಮೆರವಣಿಗೆ ಪ್ರಾರಂಭವಾಗಿದೆ. ಕೆಲವರು ಇಂಪೋರ್ಟ್ ಆಗಿ ಎರಡನೇ ಚಿತ್ರಕ್ಕೆ ನಾಪತ್ತೆಯಾಗಿಬಿಡುತ್ತಾರೆ. ಇನ್ನು ಕೆಲವರು ಐಟಂ ಸಾಂಗಿಗಾಗಿಯೇ ಇಂಪೋರ್ಟ್ ಆಗಿ ಜೇಬು ತುಂಬಿಸಿಕೊಂಡು ನಿಕಾಲಿಯಾಗುತ್ತಾರೆ. ಕೆಲವರು ಇಂಪೋರ್ಟ್ ಆಗಿ ಇಲ್ಲೇ ಸೆಟಲ್ ಆಗಿಬುಡುತ್ತಾರೆ.ಇನ್ನಿತರರು ಮೆರವಣಿಗೆಯಲ್ಲಿ ಬಂದು ಹಾಗೆ ಮಂಗಮಾಯವಾಗುತ್ತಾರೆ.ಹಾಗೆ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಆಮದಾಗಿರುವ ಹೊಸನಟಿ ಅಂದ್ರಿತಾ ರೇ.

ಫಳಫಳಿಸುವ ಜಿಂಕೆ ಕಂಗಳಲ್ಲಿ ಅಪೂರ್ವ ಹೊಳಪು. ಅದೇ ಇವಳ ಆಸ್ತಿ. ಪಕ್ಕದಿಂದ ನೋಡಿದರೆ ಅರೆರೆ ಇವಳು ಮಾನ್ಯಳ ತಂಗಿಯಾ ಅನ್ನುವಹಾಗಿದ್ದಾಳೆ. ಕಣ್ಣಲ್ಲಿ ಕಣ್ಣಟ್ಟು ನೋಡಿದರೆ ರೇಖಾಗಿಂತಲೂ ಚೆಲುವೆ. ಟೂತ್ ಪೇಸ್ಟ್ ಜಾಹಿರಾತಿಗೆ ಹೇಳಿ ಮಾಡಿಸಿದಂಥ ದಾಳಿಂಬೆ ಸಾಲುಗಳು. ನಟಿಯರ ಮೆರವಣಿಗೆಯಲ್ಲಿ ಎದ್ದುಕಾಣುವ ಈ ನವನಟಿ ಸದ್ಯಕ್ಕೆ 'ಮೆರವಣಿಗೆ' ಚಿತ್ರದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣ ಮಾಡುತ್ತಿದ್ದಾರೆ. ಈಕೆ ಮುಖವೇ ಮೆರವಣಿಗೆ ಚಿತ್ರಕಥೆಗೆ ಸ್ಪೂರ್ತಿ ಎನ್ನುವ ಜನಾರ್ಧನ ಮಹರ್ಷಿಯ ಸ್ಟೇಟ್ಮೆಂಟೇ ಅಂದ್ರಿತಾ ಚೆಲುವಿಗೆ ಸಿಕ್ಕ ಕಾಂಪ್ಲಿಮಂಟು.

ಡೈನಮಿಕ್ ಹೀರೋ ದೇವರಾಜ್ ಅವರ ಪುತ್ರ ಪ್ರಜ್ವಲ್ 'ಮೆರವಣಿಗೆ'ಯ ನಾಯಕ. ಈ ಚಿತ್ರದ ವಿಶೇಷವೆಂದರೆ ನಾಯಕ, ನಾಯಕಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ 50 ಕಲಾವಿದರೂ ನೇತ್ರದಾನವನ್ನು ಮಹಾದಾನ ಎಂದು ತಿಳಿದು ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿರುವುದು.

ಅಂದ್ರಿತಾ ರೇ ಎಂಬ ಹೆಸರಿನಲ್ಲೇ ಏನೋ ಒಂದು ರೀತಿ ಆಕರ್ಷಣೆ ಇದೆ. ಇನ್ನು ಈಕೆಯ ಮುದ್ದು ಮುಖದ ಬಗ್ಗೆ ಹೇಳಬೇಕೆಂದರೆ, ಟಿವಿಎಸ್ ಸ್ಕೂಟಿ, ಕ್ಯಾಡ್‌ಬರಿ ಚಾಕೋಲೇಟ್, ಪ್ಯಾರಾಚೂಟ್ ಹೇರ್ ಆಯಿಲ್ ಜಾಹಿರಾತಿಗಳಲ್ಲಿ� ನೋಡೇ ಇರುತ್ತೀರ. ಈಕೆ ಮೂಲತಃ ಬಂಗಾಳಿ. ಸದ್ಯ ಈಕೆ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ.

ಹಾಗೆ ತನ್ನ ಹೆಸರನ್ನು ಎಲ್ಲರೂ ಅಂದ್ರಿತಾ ರೇ ಎಂದು ತಪ್ಪಾಗಿ ಕರೆಯುತ್ತಿದ್ದಾರೆ ಎಂದು ಚಿಗರೆ ಕಂಗಳ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.ನನ್ನ ಹೆಸರು ಅಂದ್ರಿತಾ ಅಲ್ಲ ಐಂದ್ರಿತಾ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಈ ವಿಷಯವನ್ನು ಸಾಕಷ್ಟು ಸಲ ಸ್ಪಷ್ಟಪಡಿಸಿದ್ದೇನೆ ಎನ್ನುತ್ತಾರೆ ಐಂದ್ರಿತಾ.

ನಾನು ಅಭಿನಯಿಸಿರುವ ಚಿತ್ರಗಳ ಪ್ರೊಮೋಗಳಲ್ಲೂ ನನ್ನ ಹೆಸರನ್ನು ಅಂದ್ರಿತಾ ಎಂದೇ ಬರೆಯುತ್ತಿದ್ದಾರೆ. ಎಲ್ಲಾ ಮಾಧ್ಯಮಗಳಲ್ಲೂ ಹಾಗೆ ಬರೆಯುತ್ತಿದ್ದಾರೆ. ನಾನು ಅಂದ್ರಿತಾ ಅಲ್ಲ ಐಂದ್ರಿತಾ ಕಣ್ರೀ ಎಂದು ಅವರು ಮತ್ತೊಮ್ಮೆ ತಮ್ಮ ಹೆಸರಿನ ಬಗೆಗಿನ ಗೊಂದಲವನ್ನು ನಿವಾರಿಸಿದ್ದಾರೆ.

ಈ ವಿಷಯವಾಗಿ ಸಿನಿಮಾ ಮಂದಿಗೆ ನಾನು ಈಗಾಗಲೇ ಸಾಕಷ್ಟು ಬಾರಿ ತಿಳಿಸಿದ್ದೇನೆ. ಹಾಗಿದ್ದೂ ಪುನಃ ಅದೇ ತಪ್ಪು ಮಾಡುತ್ತಿದ್ದಾರೆ. ಹಾಗಾಗಿ ನಾನು ಈ ವಿಷಯವನ್ನು ಮರೆತೇ ಬಿಟ್ಟಿದ್ದೇನೆ ಎನ್ನುತ್ತಾರೆ ಮಿಂಚುಳ್ಳಿ ಚೆಲುವೆ ಐಂದ್ರಿತಾ. ಇನ್ನು ಮುಂದಾದರೂ ತನ್ನನ್ನು ಐಂದ್ರಿತಾ ಎಂದು ಕರೆಯಿರಿ. ಖಂಡಿತ ನಾನು ಖುಷಿಪಡುತ್ತೇನೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

0 comments:

Post a Comment